A girl has uploaded a video on YouTube about Bigg Boss Kannada 5. She says, she hates Jagan & he should come out of Big Boss House
''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು? 'ಬಿಗ್ ಬಾಸ್' ಕಾರ್ಯಕ್ರಮ ಮೂರು ವಾರ ಮುಗಿಸಿ ಇದೀಗ ನಾಲ್ಕನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮದಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರೇಕ್ಷಕರಿಂದ ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಪ್ರತಿ ದಿನ 8 ಗಂಟೆಗೆ ಟಿವಿ ಮುಂದೆ ಕೂರುವ ಜನ ಕಾರ್ಯಕ್ರಮದ ಬಗ್ಗೆ ತಮ್ಮದೆ ಆದ ಅಭಿಪ್ರಾಯ ಹೊಂದಿರುತ್ತಾರೆ. ಈಗ ಅದೇ ರೀತಿ 'ಬಿಗ್ ಬಾಸ್' ಕಾರ್ಯಕ್ರಮದ ಫ್ಯಾನ್ ಆಗಿರುವ ಒಬ್ಬ ಯುವತಿ ಅದರ ಬಗ್ಗೆ ಯೂ ಟ್ಯೂಬ್ ನಲ್ಲಿ ಮಾತನಾಡಿದ್ದಾರೆ. ವಿಶೇಷ ಅಂದರೆ ಈ ಹುಡುಗಿಯ ವಿಡಿಯೋ ಈಗ ಯೂ ಟ್ಯೂಬ್ ನಲ್ಲಿ 4ನೇ ಟ್ರೆಂಡಿಂಗ್ ನಲ್ಲಿದೆ. 'ಬಿಗ್ ಬಾಸ್' ಬಗ್ಗೆ ಅನೇಕರು ಯೂ ಟ್ಯೂಬ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ, ಅದರಲ್ಲಿ ಅಂತ ವಿಶೇಷ ಏನು ಇಲ್ಲ. ಆದರೆ ಈ ಹುಡುಗಿಯ ವಿಡಿಯೋ ಮಾತ್ರ ಇದೀಗ ಯೂ ಟ್ಯೂಬ್ ನಲ್ಲಿ 4ನೇ ಟ್ರೆಂಡಿಂಗ್ ನಲ್ಲಿದೆ. ಸೋ, ಇದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.