ಟಗರು ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಪುಟ್ಟ ಪೋರನಿಗೆ ಅಣ್ಣಾವ್ರ ಫ್ಯಾಮಿಲಿ ಫಿದಾ

2017-11-08 1

Puneeth Rajkumar and Shiva Rajkumar were happy to see Yashwant's yoga performance at 'Tagaru' audio & teaser launch. Dr. Raj family were impressed with this young boy's Yoga performance.


ಪುಟ್ಟ ಪೋರನಿಗೆ ತಲೆಬಾಗಿದ 'ಅಣ್ಣಾವ್ರ' ಮಕ್ಕಳು. ಡಾ.ರಾಜ್ ಕುಮಾರ್ ಕುಟುಂಬವೇ ಹಾಗೆ... ಅತಿಥಿಗಳಿಗೆ ಸತ್ಕಾರ, ಕಲೆಗೆ ಬೆಲೆ, ಪ್ರತಿಭೆಗೆ ಪುರಸ್ಕಾರ ಇವೆಲ್ಲವನ್ನೂ ಮಾಡ್ತಾರೆ. ನಿನ್ನೆ ಶಿವಣ್ಣ ಅಭಿನಯದ 'ಟಗರು' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಭಿಮಾನಿಗಳು ನಡೆಸಿದ ಅದ್ದೂರಿ ಕಾರ್ಯಕ್ರಮದಲ್ಲಿ ಬಂದಿದ್ದ ಪುಟ್ಟ ಪೋರನಿಗೆ ಇಡೀ ರಾಜ್ ಕುಟುಂಬವೇ ತಲೆ ಬಾಗಿದೆ. ಅಣ್ಣಾವ್ರ ಫ್ಯಾಮಿಲಿ ಪ್ರತಿಭಾವಂತರಿಗೆ ತಲೆಬಾಗಿರುವುದು ಇದೇ ಮೊದಲೇನಲ್ಲ. ಸಾಕಷ್ಟು ಬಾರಿ ಕಾರ್ಯಕ್ರಮದಲ್ಲಿ ಸಣ್ಣ ಸಣ್ಣ ಪ್ರತಿಭೆಗಳನ್ನ ಗುರುತಿಸಿ ಅವ್ರಿಗೆ ಸಲ್ಲಬೇಕಾದ ನ್ಯಾಯ ದೊರಕಿಸಿರುವ ಅದೆಷ್ಟೋ ಉದಾಹರಣೆ ಕಣ್ಣಮುಂದಿವೆ. ಹಾಗಾದ್ರೆ ನಿನ್ನೆ ರಾಜ್ ಪುತ್ರರು ತಲೆಬಾಗಿದ್ದು ಯಾರಿಗೆ, ಆ ಪುಟ್ಟ ಪೋರ ಮಾಡಿದ ಅಂತಹ ಮ್ಯಾಜಿಕ್ ಆದರೂ ಏನು. ನಿನ್ನೆ 'ಟಗರು' ಟೀಸರ್ ಬಿಡುಗಡೆ ಸಮಾರಂಭದಲ್ಲಿ 'ಯಶವಂತ್' ಎನ್ನುವ ಹನ್ನೊಂದು ವರ್ಷದ ಹುಡುಗ ತನ್ನ ಯೋಗಾಭ್ಯಾಸವನ್ನ ಪ್ರದರ್ಶನ ಮಾಡಿದ. ಸುಮಾರು ಆರು ವರ್ಷಗಳಿಂದ ಯೋಗ ಕಲಿಯುತ್ತಿರುವ ಯಶವಂತ್ ಅಣ್ಣಾವ್ರ ಅಭಿಮಾನಿ.