ಟಗರು ಸಿನಿಮಾದ ದುನಿಯಾ ಸೂರಿಗೆ ಪುನೀತ್ ರಾಜಕುಮಾರ್ ಕೊಟ್ರು ಒಳ್ಳೆ ಗಿಫ್ಟ್

2017-11-08 3

Tagaru movie team receive best gift from Puneeth Rajkumar. Puneeth Rajkumar plans to launch his new Audio Company & Tagaru Audio Launch programme at a time.

ದುನಿಯಾ ಸೂರಿಗೆ ಪವರ್ ಸ್ಟಾರ್ ಕೊಟ್ಟರು ಬಂಪರ್ ಗಿಫ್ಟ್.! ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪಟ್ಟಿಯಲ್ಲಿ 'ಟಗರು' ಕೂಡ ಒಂದು. ದುನಿಯಾ ಸೂರಿ ಡೈರೆಕ್ಷನ್, ಹ್ಯಾಟ್ರಿಕ್ ಹೀರೋ ಆಕ್ಟಿಂಗ್ ಎಲ್ಲವನ್ನೂ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರತಂಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಅಪ್ಪು ಅವರ ನೆಚ್ಚಿನ ನಿರ್ದೇಶಕರಲ್ಲಿ ಸೂರಿ ಕೂಡ ಒಬ್ಬರು. ಸೂರಿ ಜೊತೆ ವರ್ಕ್ ಮಾಡುವುದಷ್ಟೇ ಅಲ್ಲದೆ ಅವರ ಸಿನಿಮಾ ಮೇಕಿಂಗ್ ಇಷ್ಟ ಪಡುವ ಪವರ್ ಸ್ಟಾರ್ 'ಟಗರು' ಚಿತ್ರತಂಡಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈಗಾಗಲೇ ಸುದ್ದಿಯಾಗಿರುವಂತೆ 'ಅಂಜನಿಪುತ್ರ' ಸಿನಿಮಾದ ಹಾಡುಗಳು ಅಪ್ಪು ಆಡಿಯೋ ಸಂಸ್ಥೆಯಲ್ಲಿ ರಿಲೀಸ್ ಆಗುತ್ತೆ ಅಂತ ಸುದ್ದಿ ಆಗಿತ್ತು. ಆದ್ರೆ ಈಗ 'ಟಗರು' ಚಿತ್ರದ ಆಡಿಯೋ ಲಾಂಚ್ ಹಾಗೂ ಪುನೀತ್ ಆಡಿಯೋ ಕಂಪನಿಯ ಸಮಾರಂಭ ಒಟ್ಟಿಗೆ ನಡೆಯೋದು ಕನ್ಫರ್ಮ್ ಆಗಿದೆ.