Note Ban Anniversary : ನರೇಂದ್ರ ಮೋದಿಯವರ ನೋಟ್ ಬ್ಯಾನ್ ಐಡಿಯಾ ವಿವೇಚನಾರಹಿತ ಅಂದ್ರು ರಾಹುಲ್ ಗಾಂಧಿ

2017-11-08 116

On the first anniversary of Demonetization, Congress party vice president Rahul Gandhi dubbed the note ban as a tragedy. Gandhi further slammed Center's decision of swapping currency and said that his party stands with those who were hit by Prime Minister Modi's thoughtless act.

ಅಪನಗದೀಕರಣ ಎಂಬುದು ಮೋದಿಯ ವಿವೇಚನಾರಹಿತ ನಡೆ: ರಾಹುಲ್. "ಅಪನಗದೀಕರಣ ಎಂಬುದು ಮೋದಿಯವರ ವಿವೇಚನಾರಹಿತ ನಡೆ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಪನಗದೀಕರಣದ ಮೊದಲ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಅವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನಿಸಿದ ಅಪನಗದೀಕರಣ ಎಂಬ ದುರಂತದಿಂದ ನೋವನುಭವಿಸಿದ ಎಲ್ಲ ಭಾರತೀಯರೊಂದಿಗೆ ನಮ್ಮ ಪಕ್ಷವಿದೆ ಎಂದು ಇದೇ ಸಂದರ್ಭದಲ್ಲಿ ಜನರಿಗೆ ಅಭಯ ನೀಡಿದ್ದಾರೆ.ನರೇಂದ್ರ ಮೋದಿಯವರು ವಿವೇಚನೆಯಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ಇಡೀ ದೇಶದ ಜನರು ನೋವನ್ನುಂಡಿದ್ದಾರೆ. ಆ ಎಲ್ಲ ಜನರ ಜೊತೆಗೆ ನಾವಿದ್ದೇವೆ ಎಂದು ಸಹ ಅವರು ಟ್ವೀಟ್ ಮಾಡಿದ್ದಾರೆ.ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಅಪನಗದೀಕರಣ ಘೋಷಣೆಯಾದ ನ.8 ರ ದಿನವನ್ನು ಕರಾಳ ದಿನವೆಂದು ಆಚರಿಸಲು ಸಜ್ಜಾಗಿವೆ.ಇನ್ನಷ್ಟು ಮಾಹಿತಿಗೆ ಈ ವೀಡಿಯೋ ನೋಡಿ ಹಾಗು ನಿಮ್ಮ ಕಾಮೆಂಟ್ಸ್ ನಮಗೆ ತಿಳಿಸಿ