gayat separate religion: Controversial statement of Basava Jaya Mruthyunjaya Swamiji of Koodalasangama Panchamasali Math in Hubballi during Lingayat rally on Sunday (Nov 5) for separate religion status for Lingayat. M B Patil supports Swamiji's controversial statement.
ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ವೀರಶೈವ ಸಮಾಜದ ಕುರಿತು ಪಂಚಮಸಾಲಿ ಪೀಠದ ಬಸವಜನಮೃತ್ಯುಂಜಯ ಸ್ವಾಮೀಜಿ ನೀಡಿದ ಹೇಳಿಕೆಯನ್ನ ಸಚಿವ ಎಂ ಬಿ ಪಾಟೀಲ ಸಮರ್ಥಿಸಿಕೊಂಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಪ್ಪ ಎನ್ನುವ ಪದ ಗೌರವದ ಸಂಕೇತ. ಇದನ್ನೆ ದೊಡ್ಡದು ಮಾಡೋದು ಸರಿಯಲ್ಲ. ಪಂಚಮಸಾಲಿ ಶ್ರೀಗಳ ಹೇಳಿಕೆಯನ್ನ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ವೀರಶೈವರಿಗೆ 5 ಪೀಠಗಳಿವೆ,ಐದು ಗುರುಗಳು. ಲಿಂಗಾಯತರಿಗೆ ಬಸವಣ್ಣ ಒಬ್ಬರೇ ಗುರು ಎನ್ನುವ ಅರ್ಥದಲ್ಲಿ ಶ್ರೀಗಳು ಮಾತನಾಡಿದ್ದಾರೆ.ಇದ್ರಲ್ಲಿ ಯಾವುದೆ ದುರುದ್ದೇಶ, ಕೀಳು ಭಾವನೆ ಇಲ್ಲ.ಮಾತಾ ಮಹಾದೇವಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದಾಗ ಮಾಧ್ಯಮಗಳು ಎಲ್ಲಿ ಹೋಗಿದ್ವು ಎನ್ನುವ ಮೂಲಕ ಮಾಧ್ಯಮಗಳ ಮೇಲೆ ಗುಬೆ ಕೂರಿಸಲು ಯತ್ನಿಸಿದರು. ಇನ್ನು ಸ್ವಾಮೀಜಿಗಳ ಒಕ್ಕೂಟ ರಚನೆ ವಿಚಾರವಾಗಿ ಮಾತನಾಡಿದ ಎಂ ಬಿ ಪಾಟೀಲ ಸ್ವಾಮೀಜಿಗಳು ಒಕ್ಕೂಟ ಮಾಡಿಕೊಳ್ಳಲಿ.ನಮ್ಮ ಉಸಾಬರಿ ಬಂದ್ರೆ ಸರಿ ಇರಲ್ಲ ಎಂದ್ರು. ಇನ್ನು ಬರುವ ಡಿಸೆಂಬರ್ 10 ರಂದು ವಿಜಯಪುರದಲ್ಲಿ ಬೃಹತ್ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗ್ತಿದೆ. ಹೋರಾಟ ಎಲ್ಲಿಯೂ ದಾರಿ ತಪ್ಪಿಲ್ಲ. ಇನ್ನು ಬಬಲೇಶ್ವರ ಕ್ಷೇತ್ರದಿಂದ 50 ಸಾವಿರ ಲೀಡ್ ನಲ್ಲಿ ಗೆದ್ದು ಬರೋದು ನಿಶ್ಚಿತ. ತಲೆಕೆಳಗೆ ಕಾಲು ಮೇಲೆ ಮಾಡಿದ್ರು ನನ್ನನ್ನ ಸೋಲಿಸೋದಕ್ಕೆ ಸಾಧ್ಯವಿಲ್ಲ ಎಂದ್ರು..