ಬಿಗ್ ಬಾಸ್ ಕನ್ನಡ ಸೀಸನ್ 5ನ ಹಿಂದಿಕ್ಕಿದ ಪುಟ್ಟ ಗೌರಿ ಮದುವೆ ಧಾರಾವಾಹಿ

2017-11-04 1

Puttagowri maduve Serial Beats Bigg Boss Kannada 5 in 43rd Week TV Rating. Putta Gowri Maduve serial takes No. 1 position.

ಬಿಗ್' ಶಾಕ್: 'ಪುಟ್ಟಗೌರಿ' ಮುಂದೆ 'ಬಿಗ್ ಬಾಸ್' ಆಟ ನಡೆಯಲಿಲ್ಲ.! 'ಬಿಗ್ ಬಾಸ್' ಕನ್ನಡ ರಿಯಾಲಿಟಿ ಶೋ ಎನ್ನುವುದು ಕನ್ನಡ ಕಿರುತೆರೆಯಲ್ಲಿ ಅತಿ ದೊಡ್ಡ ಕಾರ್ಯಕ್ರಮ. ಸಾಮಾನ್ಯವಾಗಿ ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚು ರೇಟಿಂಗ್ ಬರುವುದು ಸಹಜ. ಆದ್ರೆ, ಈ ಬಾರಿಯ 'ಬಿಗ್ ಬಾಸ್'ಗೆ ಕನ್ನಡ ಧಾರಾವಾಹಿಗಳು ಶಾಕ್ ನೀಡುತ್ತಿದೆ. ಅದರಲ್ಲೂ 'ಪುಟ್ಟಗೌರಿ ಮದುವೆ' ಅಂತೂ ಎಷ್ಟೇ ಟೀಕೆ, ಟ್ರೋಲ್ ಗೆ ಒಳಪಟ್ಟರು ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಮಾತ್ರ ಸ್ವಲ್ಪವೂ ಹಿನ್ನೆಡೆ ಅನುಭವಿಸಿಲ್ಲ. ಹಾಗಿದ್ರೆ, 'ಬಿಗ್ ಬಾಸ್' ರೇಟಿಂಗ್ ಎಷ್ಟು? ಪುಟ್ಟಗೌರಿ ಮದುವೆ ರೇಟಿಂಗ್ ಎಷ್ಟು? ಉಳಿದ ಧಾರಾವಾಹಿಗಳ ಕಥೆ ಏನು? 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಟಿವಿ ರೇಟಿಂಗ್ ನಲ್ಲಿ ನಂಬರ್.1 ಸ್ಥಾನದಲ್ಲಿರುತ್ತೆ ಎಂದುಕೊಂಡವರಿಗೆ 'ಪುಟ್ಟಗೌರಿ' ಶಾಕ್ ನೀಡಿದೆ. ಹೌದು, ಎಲ್ಲರ ಲೆಕ್ಕಚಾರವನ್ನ ಉಲ್ಟಾ ಮಾಡಿರುವ ಗೌರಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.