ಬಿಗ್ ಬಾಸ್ ಕನ್ನಡ ಸೀಸನ್ 5 : ಮನೆಯಿಂದ ಹೊರ ಬಂದಮೇಲೆ ಚಂದನ್ ಶೆಟ್ಟಿ ಮದುವೆಯಂತೆ

2017-11-03 1,395

Bigg Boss Kannada 5: Week 3: Jaya Srinivasan advertises for Chandan Shetty's marriage. Jaya Srinivasan's future prediction says Chandan Shetty will get married once he comes out from Big Boss House.

'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.! ಮೂರೇ ಮೂರು ಪೆಗ್ ಗೆ...' ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋದ ಕೂಡಲೆ ಮದುವೆ ಆಗುತ್ತಾರಂತೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಚಂದನ್ ಶೆಟ್ಟಿ ಸಿದ್ದವಾಗಿದ್ದಾರಂತೆ. ಹಾಗಂತ ನಾವು ಹೇಳ್ತಿಲ್ಲ. ಬದಲಾಗಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗುರೂಜಿ ಹೇಳಿದ್ದಾರೆ. ಅದು ಚಂದನ್ ಶೆಟ್ಟಿ ಪಕ್ಕದಲ್ಲಿ ಇರುವಾಗಲೇ.! ಹೇಳಿ ಕೇಳಿ ಜಯಶ್ರೀನಿವಾಸನ್ ಹಾಗೂ ಅವರ 'ಸಂಖ್ಯೆ'ಗಳ ಬಗ್ಗೆ ಚಂದನ್ ಶೆಟ್ಟಿಗೆ ನಂಬಿಕೆ ಇದೆ. ಜಯಶ್ರೀನಿವಾಸನ್ ರವರ ಸಲಹೆಗಳನ್ನ ಚಾಚು ತಪ್ಪದೆ ಪಾಲಿಸಿ ಚಂದನ್ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ಇದೀಗ ಅದೇ ಚಂದನ್ ಶೆಟ್ಟಿ ಮದುವೆಯ ಬಗ್ಗೆ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಯಲ್ಲಿ 'ಜಾಹೀರಾತು' ನೀಡಿದ್ದಾರೆ.'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಕೂಡಲೆ ಚಂದನ್ ಶೆಟ್ಟಿ ಎದೆಯಲ್ಲಿ ಗಿಟಾರ್ ಬಾರಿಸಲು ಶುರುವಾಗಿದೆ.

Videos similaires