ನಮ್ಮ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳಿಗೂ ಕೂಡ ಒಂದು ಕಾರಣವಿರುತ್ತದೆ. ಆ ಕಾರಣಗಳನ್ನು ಪರಿಹಾರ ಮಾಡಿಕೊಳ್ಳಲು ಕೆಲವು ದೇವತಾ ಆರಾಧನೆ ಮಾಡಿಕೊಳ್ಳುವುದರಿಂದ ಪರಿಸ್ಥಿತಿ ಸರಿಹೋಗುತ್ತದೆ. ಹಾಗಿದ್ದಲ್ಲಿ ಜೀವನದಲ್ಲಿ ಆಗುವ ಲಾಭ, ನಷ್ಟ, ಸುಖ, ದುಃಖಗಳನ್ನು ತಿಳಿದುಕೊಳ್ಳುವ ಕಾತುರ ಸಾಮಾನ್ಯವಾಗಿ ಎಲ್ಲಿರಿಗೂ ಇರುವಂತಹದು.
ಗ್ರಹಗತಿಗಳು ಪ್ರತಿಯೊಂದು ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೆಲವರಿಗೆ ಉತ್ತಮವಾದ ಪರಿಣಾಮ ಬೀರಿದರೆ ಮತ್ತೊಬ್ಬರಿಗೆ ನಕಾರಾತ್ಮಕವಾದ ಪರಿಣಾಮಗಳು ಬೀರುತ್ತದೆ. ಹೀಗಿರುವಾಗ ನಮ್ಮ ನಕಾರಾತ್ಮಕ ಘಟನೆಗಳಿಂದ ಪಾರಾಗಬೇಕಾದರೆ ಕೆಲವು ದೇವತೆಗಳ ಆರಾಧನೆ ಮಾಡುವುದರ ಮೂಲಕ ಪರಿಹಾರ ಮಾಡಿಕೊಳ್ಳೊಣ.
ಹಾಗಾದರೆ ಬನ್ನಿ ಈ ದಿನ ನಮ್ಮ ದಿನ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಈ ದಿನ ಉತ್ತಮವಾಗಿದೆ ಮತ್ತು ಯಾವ ರಾಶಿಗೆ ಕೆಡುಕು ಸಂಭವಿಸುತ್ತದೆ ಎಂಬುದನ್ನು ನಮ್ಮ ಬೋಲ್ಡ್ ಸ್ಕೈನ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.