Bigg Boss Kannada 5: Week 2: Viewers have taken Colors Super Official Facebook page to express their anger towards Sudeep for using the word 'Insects' for Common Man.
'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರು ಮೂಲೆಗುಂಪಾಗುತ್ತಿರುವ ಬಗ್ಗೆ ಇಷ್ಟು ದಿನ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿದ್ದ ವೀಕ್ಷಕರು ಇದೀಗ ಸುದೀಪ್ ಮೇಲೆ ಬೇಸರಗೊಂಡಿದ್ದಾರೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಜೊತೆ ಪಂಚಾಯತಿ ನಡೆಸುವಾಗ, ಮಾತಿನ ಮಧ್ಯದಲ್ಲಿ Insects (ಕೀಟಗಳು) ಎಂಬ ಪದ ಸುದೀಪ್ ಬಾಯಿಂದ ಬಂತು. ಅಷ್ಟಕ್ಕೂ, ಗಾರ್ಡನ್ ಏರಿಯಾದಲ್ಲಿ ತುಂಬಾ Insects (ಕೀಟಗಳು) ಇವೆ ಅಂತ ಹೇಳಿದ್ದು ನಿವೇದಿತಾ ಗೌಡ. ಅದೇ ಮಾತನ್ನ ಇಟ್ಟುಕೊಂಡು 'YES/NO' ರೌಂಡ್ ನಲ್ಲಿ ''ಎಲ್ಲ ಸಮಸ್ಯೆಗಳಿಗೆ ಗಾರ್ಡನ್ ನಲ್ಲಿ ಇರುವ Insects ಕಾರಣ'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು. ಅದಕ್ಕೆ ಸಿಹಿ ಕಹಿ ಚಂದ್ರು ನಕ್ಕುಬಿಟ್ಟು, ''Insects ಅನ್ನೋ ಪದವನ್ನು ನೀವು ಬಹಳ ಚೆನ್ನಾಗಿ ಬಳಸುತ್ತಿದ್ದೀರಾ. ಥ್ಯಾಂಕ್ಸ್ ಟು ನಿವೇದಿತಾ'' ಎಂದರು.