ಸುದೀಪ್ Insects (ಕೀಟಗಳು) ಅಂತ ಕರೆದಿದ್ದು ಯಾರಿಗೆ.? ಯಾಕೆ.? ಜನಸಾಮಾನ್ಯ ಸ್ಪರ್ಧಿಗಳನ್ನು ತುಳಿಯುತ್ತಿರುವುದು ಮೊದಲೇ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ಈ ಮಧ್ಯೆ Insects (ಕೀಟಗಳು) ಎಂಬ ಪದ ಬಳಕೆ ಆಗಿರುವುದು ವೀಕ್ಷಕರಿಗೆ ಕೋಪ ತರಿಸಿದೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಬಾಯಿಂದ Insects (ಕೀಟಗಳು) ಎಂಬ ಪದ ಹೊರಬಂದಿರುವುದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.ಅಷ್ಟಕ್ಕೂ, Insects (ಕೀಟಗಳು) ಬಗ್ಗೆ ಸುದೀಪ್ ಮಾತನಾಡಿದ್ದು ಯಾಕೆ.? Insects (ಕೀಟಗಳು) ಟಾಪಿಕ್ ಶುರು ಆಗಿದ್ದು ಎಲ್ಲಿಂದ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. 'ಬಿಗ್ ಬಾಸ್' ಮನೆಯಲ್ಲಿ ಕಾಮನ್ ಮ್ಯಾನ್ ನ ಸೆಲೆಬ್ರಿಟಿಗಳು ತುಳಿಯುತ್ತಿದ್ದಾರಾ.?'' ಎಂಬ ಪ್ರಶ್ನೆಯನ್ನ ಸುದೀಪ್ ಎಲ್ಲರ ಮುಂದಿಟ್ಟರು. ಈ ಪ್ರಶ್ನೆಗೆ ಎಲ್ಲರೂ ಉತ್ತರ ಕೊಡುತ್ತಿರುವಾಗಲೇ, ನಿವೇದಿತಾ ಗೌಡ ಸರದಿ ಬಂತು. ಆಗ ಸುದೀಪ್, ''ಜಯಶ್ರೀನಿವಾಸನ್ ಅವರು ಸೆಲೆಬ್ರಿಟಿ ಆಗಿ ಹೋಗಿ ಒಳಗೆ ಕಾಮನ್ ಮ್ಯಾನ್ ತರಹ ಆಗಿದ್ರೆ, ತಾವು ಗಾರ್ಡನ್ ನಿಂದ ಹೋಗಿ ರೂಮಿಗೆ ಸೇರ್ಕೊಂಡಿದ್ದೀರಾ'' ಅಂತ ನಿವೇದಿತಾ ಗೌಡಗೆ ಕೇಳಿದರು.