ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಗೆ ಎಲ್ಲಾ ಸ್ಪರ್ಧಿಗಳು ದೂರಿದ್ದು ಹೀಗೆ

2017-10-30 1

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಎರಡು ವಾರಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ 'ಬಿಗ್ ಬಾಸ್' ಮನೆಯಲ್ಲಿ ಒಡಕು ಮೂಡಿದೆ. 'ದೊಡ್ಮನೆ' ಇಬ್ಭಾಗ ಆಗಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳು ಎಂಬ ಎರಡು ಗುಂಪುಗಳಾಗಿವೆ. ''ನಮ್ಮನ್ನ ತಿರಸ್ಕಾರ ಮನೋಭಾವದಿಂದ ಸೆಲೆಬ್ರಿಟಿ ಸ್ಪರ್ಧಿಗಳು ಕಾಣುತ್ತಿದ್ದಾರೆ. ನಮ್ಮನ್ನೆಲ್ಲ ಮೂಲೆಗುಂಪು ಮಾಡುತ್ತಿದ್ದಾರೆ'' ಎಂದು ಜನಸಾಮಾನ್ಯ ಸ್ಪರ್ಧಿಗಳೇ ಹೇಳಿಕೊಂಡಿದ್ದರು. ಇದಕ್ಕೆ ಸೆಲೆಬ್ರಿಟಿ ಸ್ಪರ್ಧಿಗಳು ಏನಂತಾರೆ.? ಜನಸಾಮಾನ್ಯ ಸ್ಪರ್ಧಿಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳು ಕೀಳಾಗಿ ನೋಡುತ್ತಿರುವುದು ಯಾಕೆ.? ಕಾಮನ್ ಮ್ಯಾನ್ ನ ಸೆಲೆಬ್ರಿಟಿಗಳು ತುಳಿಯುತ್ತಿದ್ದಾರಾ.? ಎಂಬ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಮುಂದೆ ಸ್ಪರ್ಧಿಗಳು ಉತ್ತರಿಸಿದ್ದಾರೆ. ನಮ್ಮ ಕೇರ್ ಲೆಸ್ ಆಗಿ ತೆಗೆದುಕೊಂಡಿದ್ದಾರೆ ಎಂದ ದಿವಾಕರ್. ''ನಾವು ಕಾಮನ್ ಮ್ಯಾನ್ ಆಗಿರುವುದರಿಂದ ಸೆಲೆಬ್ರಿಟಿಗಳೆಲ್ಲ ನಮ್ಮನ್ನ ಒಂಥರಾ ನೋಡುತ್ತಾರೆ. ಕೆಲಸ ಮಾಡಲು ಬಿಡುವುದಿಲ್ಲ. ನಮ್ಮನ್ನ ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ. ನಮ್ಮನ್ನ ಕೇರ್ ಲೆಸ್ ಆಗಿ ತೆಗೆದುಕೊಳ್ಳುತ್ತಾರೆ. ನಾವು ಕಾಮಿಡಿ ಮಾಡಿದರೂ ನಗುವುದಿಲ್ಲ'' ಎಂದು ದಿವಾಕರ್, ಸುದೀಪ್ ಮುಂದೆ ಹೇಳಿದರು.