Bigg Boss Kannada Season 5 contestant Ashita Chandrappa has a conflict with her dad. Watch video to know more about Ashita Chandrappa and her background.
ಈ ಬಾರಿ 'ಬಿಗ್ ಬಾಸ್' 5 ಸ್ಪರ್ಧಿಗಳ ಪೈಕಿ ಆಶಿತಾ ಚಂದ್ರಪ್ಪ ಕೂಡ ಒಬ್ಬರು. ಸಿಂಪಲ್ ಸುಂದರಿಯಾಗಿರುವ ಆಶಿತಾ 'ಬಿಗ್ ಬಾಸ್' ಮನೆಯಲ್ಲಿ ತಾವಾಯ್ತು.. ತಮ್ಮ ಪಾಡಾಯ್ತು.. ಅಂತ ಎಲ್ಲರ ಜೊತೆ ನಗು ನಗುತ್ತಾ ಇದ್ದಾರೆ. ಶ್ರೀಮಂತ ಕುಟುಂಬದಿಂದ ಬಂದಿರುವ ಆಶಿತಾ ಚಂದ್ರಪ್ಪ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ತಂದೆಯ ಸಹಾಯ ಇಲ್ಲದೆ ಒಬ್ಬರೇ ಕಿರುತೆರೆ ರಂಗಕ್ಕೆ ಕಾಲಿಟ್ಟು ಇಂದು ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, 'ಬಿಗ್ ಬಾಸ್'ನಲ್ಲಿ ಸ್ಫರ್ಧಿ ಆಶಿತಾ ಚಂದ್ರಪ್ಪ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದಷ್ಟು ವಿಷಯಗಳು ನಿಮಗಾಗಿ. ಆಶಿತಾ ಮನಸ್ಸಿನಲ್ಲಿ ತುಂಬ ನೋವು ಕೂಡ ಇದೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಅವರನ್ನು ತಂದೆ ಅತಿಯಾದ ಮುದ್ದಿನಿಂದ ಬೆಳೆಸಿದರು. ಆದರೆ, ಬರುಬರುತ್ತಾ ಅದು ಆಶಿತಾ ಪಾಲಿಗೆ ಬಂಗಾರದ ಪಂಜರದಂತೆ ಆಯಿತು.