MLA Basavaraj Bommai challenged to Congress and CM Siddaramaiah, if Congress leaders including CM Siddaramaiah have capacity, they have to do marriage of AICC vice president Rahul Gandhi with dalit girl. He reacting CM Siddaramaiah’s allegation criticized as BJP don’t have concern about dalit, they are having food only in dalit family, he challenged also as BJP should make marry with dalit girl recently.
ಬಿಜೆಪಿಯವರು ದಲಿತರ ಮನೆಯಲ್ಲಿ ಊಟ-ತಿಂಡಿ ಮಾಡುವುದನ್ನು ಬಿಟ್ಟು ಅವರ ಮನೆಯಿಂದ ಹೆಣ್ಣುಮಕ್ಕಳನ್ನು ಮದುವೆಯಾಗಲಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಶಿಗ್ಗಾವಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಬೊಮ್ಮಾಯಿ, "ದೇಶದಲ್ಲಿ ದಲಿತ ಪರ ಕಾಳಜಿ ಇರುವ ಪಕ್ಷವೆಂದು ಬಡಾಯಿಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ತಾಕತ್ತಿದ್ದರೆ ದಲಿತ ಯುವತಿಯೊಂದಿಗೆ ರಾಹುಲ್ ಗಾಂಧಿಯವರ ಮದುವೆ ಮಾಡಿಸಲಿ" ಎಂದು ತಿರುಗೇಟು ನೀಡಿದರು.