Kannada Actress Shraddha Srinath is roped into play lead opposite Duniya Vijay in 'Johnny Johnny Yes Pappa'
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, 'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್ ಹಾಗೂ 'ಡಿಂಪಲ್ ಕ್ವೀನ್' ರಚಿತಾ ರಾಮ್ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ಒಟ್ಟಿಗೆ ನಟಿಸಬಹುದಿತ್ತು. ಆದ್ರೆ, 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಿಂದ ನಟಿ ರಚಿತಾ ರಾಮ್ ಹೊರಬಂದಿದ್ದಾರೆ. ರಚಿತಾ ರಾಮ್ ಜಾಗಕ್ಕೆ ಯಾರು ಎಂಟ್ರಿಕೊಡಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಕಾಡುತ್ತಿತ್ತು. ಈಗ ಕಡೆಗೂ 'ಜಾನಿ'ಗೆ ನಾಯಕಿ ಸಿಕ್ಕಿದ್ದಾರೆ
'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ನಾಯಕಿ ಅಗಿ ಶ್ರದ್ಧಾ ಶ್ರೀನಾಥ್ ಅಯ್ಕೆ ಆಗಿದ್ದಾರೆ. 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಮೂಲಕ ಮೊದಲ ಬಾರಿಗೆ ದುನಿಯಾ ವಿಜಯ್ ಗೆ ಜೋಡಿ ಆಗಲಿದ್ದಾರೆ ಶ್ರದ್ಧಾ ಶ್ರೀನಾಥ್.
'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ 'ಜಾನಿ ಮೇರಾ ನಾಮ್' ಚಿತ್ರದ ಮುಂದುವರಿದ ಭಾಗವಾಗಿದ್ದು, 'ಜಾನಿ ಮೇರಾ ನಾಮ್' ಸಿನಿಮಾದಲ್ಲಿ ದುನಿಯಾ ವಿಜಯ್ ಗೆ ರಮ್ಯಾ ಜೋಡಿಯಾಗಿದ್ದರು. ರಾಜಕೀಯದಲ್ಲಿ ಸಕ್ರಿಯರಾಗಿರುವ ರಮ್ಯಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ''ರಮ್ಯಾ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯ ಇಲ್ಲ. ಅದ್ರೆ, ಶ್ರದ್ಧಾ ಶ್ರೀನಾಥ್ ಕೂಡ ಉತ್ತಮ ನಟಿ. ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ'' ಎನ್ನುತ್ತಾರೆ ನಿರ್ದೇಶಕ ಪ್ರೀತಂ ಗುಬ್ಬಿ.
ಡೇಟ್ಸ್ ಹೊಂದಾಣಿಕೆ ಆಗದ ಕಾರಣ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದಿಂದ ರಚಿತಾ ರಾಮ್ ಹೊರಬಂದಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡರೂ, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯೇ ಬೇರೆ.!
'ಜಾನಿ' ಪಾತ್ರಕ್ಕಾಗಿ ದುನಿಯಾ ವಿಜಯ್ ಹತ್ತು ಕೆ.ಜಿ ತೂಕ ಇಳಿಸಿ ತೆಳ್ಳಗಾಗಬೇಕಾಗಿದೆ. ಪಾತ್ರಕ್ಕಾಗಿ ಈಗಾಗಲೇ ತಯಾರಿಯಲ್ಲಿ ತೊಡಗಿದ್ದಾರೆ ನಟ ದುನಿಯಾ ವಿಜಯ್.
ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕಾಗಿ ಹತ್ತು ಎಕರೆ ಜಾಗದಲ್ಲಿ 'ಕಾಲೋನಿ'ಯೊಂದರ ಸೆಟ್ ಹಾಕಲಾಗುತ್ತಿದೆ. 'ಜಾನಿ ಮೇರಾ ನಾಮ್' ಚಿತ್ರದಲ್ಲಿ ನಟಿಸಿದ್ದ ಬಹುತೇಕ ಕಲಾವಿದರ ದಂಡು 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದಲ್ಲಿ ಇರಲಿದೆ.