Sudeep, Yahs, Darshan Will Be Present In Puneeth Rajkumar’s Raajakumara 100 days Celebration

2017-07-03 1

Kannada Stars Sudeep, Yash, Upendra will Participate in Raajakumara 100 Days Celebration on July 7th at Palace Ground.

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರನ್ನು, ಇನ್ನೊಬ್ಬ ಸ್ಟಾರ್ ನಟನ ಜೊತೆ ಒಂದೇ ವೇದಿಕೆಯಲ್ಲಿ ನೋಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅಂತಹ ಆಸೆ ಈಡೇರುವ ಕಾಲ ಈಗ ಕೂಡಿಬಂದಿದೆ. ಕನ್ನಡದ ಸ್ಟಾರ್ ನಟರನ್ನು ಪುನೀತ್ ರಾಜಕುಮಾರ್ ವೇದಿಕೆ ಏರಿಸುತ್ತಿದ್ದಾರೆ.


ಅದಕ್ಕೆ ಕಾರಣ ನು ಗೊತ್ತಾ..? ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ಮೊನ್ನೆ ತಾನೆ ಶತದಿನೋತ್ಸವವನ್ನು ಆಚರಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಸ್ಟಾರ್ ನಟರನ್ನೆಲ್ಲಾ ಕರೆದು ಸಂಭ್ರಮಾಚರಣೆ ಮಾಡಬೇಕು ಅಂತ ಸಿನಿಮಾ ತಂಡ ಯೋಜನೆ ಹಾಕಿಕೊಂಡಿದೆ.


ಅದರಂತೆ ಜುಲೈ 7ರಂದು ಪ್ಯಾಲೆಸ್ ಗ್ರೌಂಡ್ ನಲ್ಲಿ ‘ರಾಜಕುಮಾರ’ ಚಿತ್ರದ ಶತದಿನೋತ್ಸವ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ನವರಸ ನಾಯಕ ಜಗ್ಗೇಶ್ ಹಾಗೂ ಇತರ ನಟ ನಟಿಯರು ಪಾಲ್ಗೊಳ್ಳಲಿದ್ದಾರೆ.


ಈಗಾಗಲೇ ಪ್ಯಾಲೆಸ್ ಗ್ರೌಂಡ್ ನಲ್ಲಿ ವೇದಿಕೆಯ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾರಣಾಂತರದಿಂದ ಪಾಲ್ಗೊಳ್ಳುತಿಲ್ಲ. ಒಟ್ಟಿನಲ್ಲಿ ಜುಲೈ 7 ರಂದು ತಾರಾ ಲೋಕವೇ ಪ್ಯಾಲೆಸ್ ಗ್ರೌಂಡ್ ನಲ್ಲಿ ಸೃಷ್ಟಿಯಾಗಲಿದೆ.

Videos similaires