Weekenda With Ramesh 3: Breaking News !? | Filmibeat Kannada

2017-06-07 99

EX Prime Minister, Politician, JDS Leader, HD Devegowda takes part in Zee Kannada Channel's popular show 'Weekend With Ramesh 3'.

ಅಂತೂ ವೀಕ್ಷಕರ ಕೂಗಿಗೆ ಜೀ ಕನ್ನಡ ವಾಹಿನಿ ಸ್ಪಂದಿಸಿದೆ. ಕೋಟ್ಯಾಂತರ ಕನ್ನಡಿಗರ ಕನವರಿಕೆ ಈಡೇರಿದೆ. ಸಾಧಕರ ಕುರ್ಚಿ ಮೇಲೆ ಮಾಜಿ ಪ್ರಧಾನಿ... ಕರ್ನಾಟಕದ ಹೆಮ್ಮೆಯ 'ಮಣ್ಣಿನ ಮಗ'...'ದಳ'ಪತಿ ಎಚ್.ಡಿ.ದೇವೇಗೌಡ ರವರನ್ನು ನೋಡಬೇಕು ಎಂದು ಆಸೆ ಪಟ್ಟವರ ಸಂಖ್ಯೆ ಲೆಕ್ಕವಿಲ್ಲ. ಆ ಎಲ್ಲರ ಆಸೆ ಇಂದು ಈಡೇರಿದೆ. ಕಡೆಗೂ ಸಾಧಕರ ಸೀಟ್ ಮೇಲೆ ಎಚ್.ಡಿ.ದೇವೇಗೌಡ ರವರನ್ನು ಕೂರಿಸುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಿದ್ದಾರೆ. ಅದಕ್ಕೆ ಸಾಕ್ಷಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿರುವ ಈ ಫೋಟೋಗಳು

ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಪಾಲ್ಗೊಂಡಿರುವ ಸಂಚಿಕೆಯ ಚಿತ್ರೀಕರಣ ಇಂದು ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದೆ

ವೀಕೆಂಡ್ ವಿತ್ ರಮೇಶ್' ಶೂಟಿಂಗ್ ಸ್ಪಾಟ್ ನಿಂದ ಇಂದು ಜೀ ಕನ್ನಡ ವಾಹಿನಿ ಫೇಸ್ ಬುಕ್ ನಲ್ಲಿ ಲೈವ್ ಕೂಡ ಮಾಡಿದೆ.

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕೇವಲ ಸಿನಿಮಾ ರಂಗದವರಿಗೆ ಮಾತ್ರ ಸೀಮಿತ ಎಂಬ ಅಪವಾದ ಹೊಂದಿತ್ತು. ಆದ್ರೀಗ, ಅದೇ ಕಾರ್ಯಕ್ರಮದ ಮೂಲಕ ರಾಜಕಾರಣಿ ಎಚ್.ಡಿ.ದೇವೇಗೌಡ ರವರನ್ನ ಸಾಧಕರ ಸೀಟ್ ಮೇಲೆ ಕೂರಿಸುವಲ್ಲಿ ಜೀ ಕನ್ನಡ ಯಶಸ್ವಿ ಆಗಿ ಅಪವಾದ ಮುಕ್ತವಾಗಿದೆ.

ಇಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದೆ. ಪ್ರಸಾರ ಯಾವಾಗಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Videos similaires