TV9 News: Delhi Assembly Elections 2015: Polls and Betting....,
ಒಂದೆಡೆ, ದೆಹಲಿ ಮತದಾನಕ್ಕೆ ಸಿದ್ಧವಾಗಿದ್ರೆ, ಮತ್ತೊಂದೆಡೆ, ಬೆಟ್ಟಿಂಗ್ ದಂಧೆ ಕೂಡ ಜೋರಾಗಿ ನಡೀತಿದೆ. ಕೋಟ್ಯಂತರ ರೂಪಾಯಿ ಬಾಜಿ ಕಟ್ಟಲಾಗಿದೆ. ದೇಶ ಗೆದ್ದ ಮೋದಿ ಅಲೆ, ಕಿರಣ್ ಬೇಡಿ ಆಗಮನದಿಂದ ದೆಹಲಿ ಬಿಜೆಪಿ ಪಾಲಾಗಲಿದೆ ಅನ್ನೋ ನಂಬಿಕೆಯಿಂದ ಆರಂಭದಲ್ಲಿ, ಬಿಜೆಪಿ ಪರ ಹೆಚ್ಚು ಹಣ ಹೂಡಿಕೆ ಆಗ್ತಿತ್ತು. ಆದ್ರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಬಂದ ಬಳಿಕ ಅದ್ರಲ್ಲೂ ಕಳೆದ ಮೂರ್ನಾಲ್ಕು ದಿನಗಳಿಂದ ಬಾಜಿ ಕಟ್ಟುವವರ ಮೈಂಡ್ಸೆಟ್ ಬದಲಾಗಿದೆ. ಬೆಟ್ಟಿಂಗ್ನಲ್ಲಿ ಹಣ ಹೂಡುವವರು, ಆಪ್ ಪರ ಹೆಚ್ಚು ಒಲವು ತೋರುತ್ತಿದ್ದಾರೆ. ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಬಿಜೆಪಿ 40ರಿಂದ 41 ಸೀಟುಗಳನ್ನು ಗೆಲ್ಲುತ್ತೆ ಅನ್ನೋದು ಬೆಟ್ಟಿಂಗ್ ರಾಜರ ಗೆಸ್ಸಿಂಗ್ ಆಗಿತ್ತು. ಆದ್ರೆ, ಈಗ ಚಿತ್ರಣ ಬದಲಾಗಿದ್ದು, ಆಪ್ 35ರಿಂದ 36 ಸೀಟು ಗೆಲ್ಲುವ ಸಾಧ್ಯತೆಯಿದೆ ಅನ್ನೋದು ಬೆಟ್ಟಿಂಗ್ ದಂಧೆಯ ನಂಬಿಕೆ. ಹಾಗೇನೇ, ಬಿಜೆಪಿ 30ರಿಂದ 31 ಸೀಟು ಗೆಲ್ಲಬಹುದು ಅನ್ನೋ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ವೀರರಿದ್ದಾರೆ. ಕಳೆದ ಬಾರಿ ನಗರಪ್ರದೇಶದಲ್ಲೇ ಆಪ್ ಹೆಚ್ಚು ಮತಗಳನ್ನ ಗಳಿಸಿತ್ತು. ಬಿಜೆಪಿಯ ಹೆಚ್ಚು ಮತದಾರರಿರೋದೂ, ನಗರ ಪ್ರದೇಶದಲ್ಲಿ. ಜೊತೆಗೆ, ಆಪ್ಗೆ ಜನಸಾಮಾನ್ಯರ ಬೆಂಬಲವೂ ಹೆಚ್ಚಿದೆ. ಹೀಗಾಗಿ, ಆಮ್ ಆದ್ಮಿ ಪಕ್ಷಕ್ಕೇ ಗೆಲುವು ಎಂಬ ಲೆಕ್ಕಾಚಾರದಲ್ಲಿರೋ ಬೆಟ್ಟಿಂಗ್ ದಂಧೆಕೋರರು, ಆಪ್ ಪರ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ. ಆದ್ರೆ, ಶೇಕಡಾವಾರು ಮತಗಳು ಆಪ್ಗೆ ಹೆಚ್ಚುಬಂದು, ಸಂಖ್ಯಾಬಲ ಕಡಿಮೆ ಯಾದ್ರೆ, ಬೆಟ್ಟಿಂಗ್ ಲೆಕ್ಕಾಚಾರವೂ ಉಲ್ಟಾ ಹೊಡೆಯಲಿದೆ. ಒಟ್ನಲ್ಲಿ, ಕೋಟ್ಯಂತರ ರೂಪಾಯಿ ಬಾಜಿ ಕಟ್ಟಲಾಗಿದ್ದು, ಎಲ್ಲರ ಲೆಕ್ಕಾಚಾರಕ್ಕೆ ಫೆಬ್ರವರಿ 10ರಂದು ಉತ್ತರ ಸಿಗಲಿದೆ.