Anna Hazare Threatens Fresh Lokpal Stir, Claiming That Modi Govt Has Gone Back on Its Promise

2015-01-28 24

TV9 News: Social Activist Anna Hazare Has Threatened Fresh Lokpal Stir, Claiming That Modi Government Has Gone Back On Its Promise.......,

ನರೇಂದ್ರ ಮೋದಿ ಸರ್ಕಾರದ ವಿರುದ್ಧವೀಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಮರ ಸಾರಲು ರೆಡಿಯಾಗಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರದ ವಿರುದ್ಧ ಲೋಕಪಾಲ್ ಜಾರಿಗೆ ಚಳವಳಿ ನಡೆಸಿದ್ದ ಅಣ್ಣಾ ಹಜಾರೆ, ಇದೀಗ ಮೋದಿ ವಿರುದ್ಧ ಹೋರಾಟ ನಡೆಸಲಿದ್ದಾರೆ. ದೇಶದ ಜನತೆಗೆ ನರೇಂದ್ರ ಮೋದಿ
ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸಾಮಾನ್ಯನ ಭರವಸೆಗೆ ಮೋಸ ಮಾಡಿದ ಆರೋಪದ ಮೇಲೆ ಶೀಘ್ರವೇ ಹೋರಾಟ ನಡೆಸಲು ಅಣ್ಣಾ ನಿರ್ಧರಿಸಿದ್ದಾರೆ. ಈ ನೂತನ ಹೋರಾಟಕ್ಕೆ ಅಣ್ಣಾ 15 ದಿನಗಳ ಗಡುವು ನೀಡಿದ್ದಾರೆ. ಈ 15 ದಿನಗಳೊಳಗಾಗಿ ಮೋದಿ ದೇಶವಾಸಿಗಳಿಗೆ ಸ್ಪಷ್ಟನೆ ನೀಡಬೇಕು, ಇಲ್ಲದಿದ್ರೆ ಹೋರಾಟ ಆರಂಭಿಸೋದಾಗಿ ಅಣ್ಣಾ ಎಚ್ಚರಿಕೆ ನೀಡಿದ್ದಾರೆ.

Tags; Anna Hazare,Modi Government,Lokpal Bill,Anna Hazare Threatens Modi,Anna Hazare Lokpal Bill,Modi Lokpal Bill,Anna Hazare Warns Modi,TV9,news,Videos..,