TV9 News: Despite Govt Ban, Jallikattu Like Sport Conducted in Rangampeta, AP....,
ಚಿತ್ತೂರು ಜಿಲ್ಲೆಯ ರಂಗಂಪೇಟೆಯಲ್ಲಿ ಜಲ್ಲಿಕಟ್ಟು ಮಾದರಿಯ ದನಗಳ ಜಾತ್ರೆ ಆಯೋಜಿಸಲಾಗಿದೆ. ಜಲ್ಲಿಕಟ್ಟು ಸ್ಪರ್ಧೆಗೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿದ ಹಿನ್ನೆಲೆಯಲ್ಲಿ ಅದೇ ಮಾದರಿಯಲ್ಲಿ ದನಗಳ ಜಾತ್ರೆ ಹೆಸರಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸಾವಿರಾರು ಜಾತಿಯ ರಾಸುಗಳನ್ನು ಜಾತ್ರೆಗೆ ಕರೆತರಲಾಗಿದ್ದು, ಭಾರೀ ಜನ ಸೇರಿದ್ದಾರೆ. ದನ ಕರುಗಳಿಗೆ ವಿಶೇಷವಾದ ಅಲಂಕಾರ ಮಾಡಲಾಗಿದ್ದು, ದನಗಳ ತಲೆಗೆ ಕಿರೀಟ ಮಾದರಿಯಲ್ಲಿ ಬಿರುದುಗಳನ್ನು ನೀಡಲಾಗ್ತಿದೆ.