Bangalore Bomb Blast: Woman Dies of Shrapnel Injuries To Her Head; Autopsy Report

2014-12-29 1

TV9 Breaking: Bangalore Bomb Blast: Chennai Woman (Bhavani) Dies of Shrapnel Injuries To Her Head; Autopsy Report...,

ಚರ್ಚ್ ಸ್ಟ್ರೀಟ್ ಸ್ಪೋಟದಲ್ಲಿ ಸಾವನಪ್ಪಿದ್ದ ಭವಾನಿ ದೇವಿ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ. ಸ್ಪೋಟದ ತೀವ್ರತೆಗೆ ಭವಾನಿ ತಲೆಗೆ ತೀವ್ರತರದ ಪೆಟ್ಟಾಗಿತ್ತು. ಮೆದುಳಿನ ಭಾಗಕ್ಕೆ ಲೋಹದ ತುಂಡುಗಳು ಹೊಕ್ಕಿದ್ದವು ಅನ್ನೋದನ್ನೂ ವೈದ್ಯರು ಖಚಿತ ಪಡಿಸಿದ್ದಾರೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಾ ವೆಂಕಟರಾಘವನ್ ನೇತೃತ್ವದಲ್ಲಿ ಭವಾನಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಸ್ಪೋಟದಲ್ಲಿ ಗಾಯಗೊಂಡಿದ್ದ ಭವಾನಿ ಮೆದುಳಿಗೆ ಪೆಟ್ಟಾಗೋ ಮೂಲಕ ವಿಪರೀತ ರಕ್ತ ಸ್ರಾವವಾಗಿತ್ತು. ಹೀಗಾಗಿ ಅವರು ಸಾವನಪ್ಪಿದ್ದಾರೆ ಅಂತಾ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡು ಮೂಲದ ಭವಾನಿ ನಿನ್ನೆಯ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡು ಮಲ್ಯಾ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಕೊನೆಯುಸಿರೆಳೆದಿದ್ರು.
--------
ಬೆಂಗಳೂರಿನ ಚರ್ಚ್​ ಸ್ಟ್ರೀಟ್​ ಸ್ಫೋಟದಲ್ಲಿ ಮೃತಪಟ್ಟಿದ್ದ ಭವಾನಿ ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಡಾ.ವೆಂಕಟರಾಘವನ್ ನೇತೃತ್ವದ ನಾಲ್ವರು ವೈದ್ಯರ ತಂಡ ನಡೆಸಿತು. ನಂತರ ಭವಾನಿ ಸಂಬಂಧಿಕರು ಮೃತದೇಹದ ಅಂತಿಮ ದರ್ಶನ ಪಡೆದರು. ಆಂಬುಲೆನ್ಸ್ ಮೂಲಕ ಭವಾನಿ ಮೃತ ದೇಹವನ್ನ ಚೆನ್ನೈಗೆ ರವಾನಿಸಲಾಗುತ್ತಿದ್ದು, ಮೃತ ದೇಹದೊಂದಿಗೆ ಇಬ್ಬರು ಪೊಲೀಸರು ಸಹ ತೆರಳಲಿದ್ದಾರೆ. ನಿನ್ನೆ ನಡೆದ ಸ್ಫೋಟದಲ್ಲಿ ತಲೆಗೆ ಗಂಭೀರ ಗಾಯವಾಗಿದ್ದ ಚೆನ್ನೈ ಮೂಲದ ಭವಾನಿ, ಚಿಕಿತ್ಸೆ ಫಲಿಸದೇ ಮಲ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Tags; bangalore Bomb Blast, Bengaluru Bomb Blast, Blast Victim, IED Bangalore, Bangalore terror attack, chennai woman blast, bhavani dies, post mortem report, autopsy report, terrorists strike bangalore, ISIS, IM terrorists, Karnataka police, church street, MG Road, TV9, News, Videos..,