TV9 News: Karnataka : Two Naxal Leaders to Surrender 'Today'..,
ರಾಜ್ಯದ ಇಬ್ಬರು ನಕ್ಸಲ್ ಮುಖಂಡರು ಇಂದು ಶರಣಾಗತಿಯಾಗ್ತಿದ್ದಾರೆ. ಸಿರಿಮನೆ ನಾಗರಾಜು ಮತ್ತು ನೂರ್ ಜುಲ್ಫಿಕರ್ ಇಂದು ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ಶರಣಾಗುತ್ತಿದ್ದಾರೆ. ಈಗಾಗಲೇ, ಜಿಲ್ಲಾ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಈ ಇಬ್ಬರ ಶರಣಾಗತಿಗೆ ಒಪ್ಪಿಗೆ ನೀಡಿರೋ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಇಬ್ಬರೂ ನಕ್ಸಲ್ ನಾಯಕರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಮಿತಿ ಮುಂದೆ ಶರಣಾಗಲಿದ್ದಾರೆ ಈ ಬಗ್ಗೆ ಚಿಕ್ಕಮಗಳೂರು ಡಿಸಿ ಬಿ ಎಸ್ ಶೇಖರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೇ ಈ ಇಬ್ಬರೂ ಶರಣಾಗತಿಗೆ ಪ್ರಸ್ತಾವನೆ ಸಲ್ಲಿಸಿದ್ರು. ಈ ಬಗ್ಗೆ ಸಮಾಲೋಚನೆ ನಡೆಸಿದ ಸಮಿತಿ, ಅಂತಿಮವಾಗಿ ಶರಣಾಗತಿಯ ರೂಪರೇಷಗಳನ್ನು ನವೆಂಬರ್ 27 ರಂದೇ ನೀಡಿದ್ರು.