TV9 News: ISIS Plans To Attract Indian Muslim Youths Arriving Iraq by Issuing 'Tourist Visa'...,
ಐಸಿಸ್ ಉಗ್ರ ಸಂಘಟನೆ ತನ್ನ ಉಗ್ರ ಪಡೆಯನ್ನ ಹೆಚ್ಚಿಸಿಕೊಳ್ಳಲು ಇದೀಗ ಹೊಸದೊಂದು ಯೋಜನೆ ರೂಪಿಸಿದೆ. ಇದಕ್ಕಾಗಿ 30 ವರ್ಷದೊಳಗಿನ ಭಾರತೀಯ ಮುಸ್ಲೀಂ ಯುವಕರನ್ನ ಸೆಳೆದುಕೊಳ್ಳಲು ನಾನಾ ಕಸರತ್ತುಗಳನ್ನ ನಡೆಸುತ್ತಿದೆ. ಇರಾಕ್ಗೆ ಆಗಮಿಸೋ ಭಾರತೀಯ ಮುಸ್ಲೀಂ ಪ್ರವಾಸಿ ಯುವಕರಿಗೆ ಪ್ರವಾಸಿ ವೀಸಾ ನೀಡಿ ಅವರನ್ನ ಸೆಳೆದುಕೊಳ್ಳುತ್ತಿದೆ. ಇರಾಕ್ನ ಸರ್ಕಾರಿ ಸ್ವಾಮ್ಯದ ಎರಡು ಸಂಘಟನೆಗಳು ಇಂತಹ ಪ್ರವಾಸಿ ವೀಸಾವನ್ನ ನೀಡುತ್ತಿವೆ, ಅಲ್ದೆ, ಇರಾಕ್ನ ಅಲ್ಶಯಾ ಟ್ರಾವೆಲ್ಸ್ ನಲ್ಲಿ ಪ್ರವಾಸಿಗರು ಪ್ರವಾಸ ನಡೆಸಲಿದ್ದಾರೆ ಅಂತಾ ರಾಷ್ಟ್ರೀಯ ತನಿಖಾ ದಳ ಬಹಿರಂಗಪಡಿಸಿದೆ.
…......................
ಕಳೆದ ಮೇ 23ರಂದು ಭಾರತದಿಂದ ಇರಾಕ್ನ ಬಾಗ್ದಾದ್ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಅಂತಾ 26ಜನ್ರ ಗುಂಪೊಂದು ತೆರಳಿತ್ತು. ಇದ್ರಲ್ಲಿ ಭಾರತ ಮೂಲದ ಆರೀಪ್ ಮಜೀದ್, ಫಹಾದ್ ಶೇಕ್, ಅಮನ್ ತಾಂಡೆಲ್, ಶಹೀಮ್ ತಂಕಿ ಎಂಬ ನಾಲ್ವರು ಐಸಿಸ್ ಜಿಹಾದಿಸ್ಟ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ. ಅಲ್ದೆ, ಐಸಿಸ್ ಬಗ್ಗೆ ಯುವಕರ ಬ್ರೇನ್ ವಾಶ್ ಮಾಡಲಾಗುತ್ತೆ ಅಂತಾ ಐಎನ್ಎ ಮಾಹಿತಿ ಕಲೆಹಾಕಿದೆ. ಸದ್ಯ ಐಸಿಸ್ ನಿಂದ ಬೇರ್ಪಟ್ಟು ಇದೀಗ ತಾಯ್ನಾಡಿಗೆ ವಾಪಾಸಾಗಿರುವ ಕಲ್ಯಾಣ್ ನ ಯುವಕ ಆರೀಫ್ ಮಜೀದ್ ನ ವಿಚಾರಣೆಯನ್ನು ಎನ್ ಐಎ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಆಲ್ದೆ, ಆತನಿಂದ ಹಲವಾರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.