TV9 News: Violence Erupts At Godman Rampal's Ashram in Hisar...,
ಪಂಜಾಬ್ನ ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ಪಾಲ್ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಹರ್ಯಾಣದ ಹಿಸ್ಸಾರ್ನ ಬಾಬಾ ಆಶ್ರಮವನ್ನು ಪೊಲೀಸರು ಸುತ್ತುವರಿದಿದ್ದು, ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಯಿದೆ. ಆದ್ರೆ ಆಶ್ರಮದ ಹೊರಭಾಗದಲ್ಲಿ ಸೇರಿರುವ ಬಾಬಾ ಭಕ್ತರೆನ್ನಲಾದ ಮಹಿಳೆಯರು ಮತ್ತು ಮಕ್ಕಳು ಪೊಲೀಸರು ಒಳನುಗ್ಗಿದ್ರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡೋ ಬೆದರಿಕೆ ಹಾಕಿದ್ದಾರೆ. ಈ ನಡುವೆ, ಪೊಲೀಸರು ಮಹಿಳೆಯರನ್ನು ಮನವೊಲಿಸಿ ತೆರವು ಮಾಡಲು ಪ್ರಯತ್ನಿಸ್ತಿದಾರೆ.
-------
ಇನ್ನು ಹತ್ಯೆ ಹಾಗೂ ಹತ್ಯೆಗೆ ಕುಮ್ಮಕ್ಕು ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರೋ ರಾಮ್ ಪಾಲ್ನನ್ನು ಬಂಧಿಸಿ ನವೆಂಬರ್ 21ರಂದು ಕೋರ್ಟ್ಗೆ ಹಾಜರುಪಡಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಜಾಮೀನು ರಹಿತ ಬಂಧನ ವಾರೆಂಟ್ ಎದುರಿಸ್ತಿರುವ ರಾಮ್ಪಾಲ್ಗೆ ಈ ಮೊದಲು ಮೂರು ಬಾರಿ ಕೋರ್ಟಿಗೆ ಹಾಜರಾಗಲು ಸೂಚನೆ ನೀಡಿದ್ದರೂ, ಹಾಜರಾಗಿರಲಿಲ್ಲ.