Former Actress Mamta Kulkarni, Husband Arrested for Drug Trafficking in Kenya

2014-11-15 1

TV9 News: Former Actress Mamta Kulkarni, Husband Arrested for Drug Trafficking in Kenya...,

ಬಾಲಿವುಡ್ ನಟಿ ಮಮತಾ ಕುಲಕರ್ಣಿ ಹಾಗೂ ಅವರ ಪತಿ ವಿಕ್ಕಿ ಗೋಸ್ವಾಮಿಯನ್ನು ಬಂಧಿಸಲಾಗಿದೆ. ಮಾದಕ ವಸ್ತು ಸಾಗಾಣೆ ಆರೋಪದಡಿ ದಂಪತಿಯನ್ನು ಕೀನ್ಯಾ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಮತಾ ಹಾಗೂ ಪತಿ ವಿಕ್ಕಿ ಗೋಸ್ವಾಮಿಯನ್ನು
ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಮಮತಾ ಪತಿ ವಿಕ್ಕಿ ಗೋಸ್ವಾಮಿಯನ್ನು 1997ರಲ್ಲಿ ಮಾದಕ ವಸ್ತು ಸಾಗಾಟದ ಆರೋಪದಡಿ ಬಂಧಿಸಲಾಗಿತ್ತು. ಅಲ್ಲದೇ 2012ರಲ್ಲಿ ವಿಕ್ಕಿ ಬಿಡುಗಡೆ ಹೊಂದಿದ್ದ. ಬಿಡುಗಡೆ ಬಳಿಕ ವಿಕ್ಕಿ ನೈರೋಬಿಯಾದ ಕೀನ್ಯಾದಲ್ಲಿ ವಾಸವಿದ್ದ. ಆತನನ್ನು ಭೇಟಿಯಾಗಲು ಮಮತಾ ಕೀನ್ಯಾಕ್ಕೆ ತೆರಳಿದ್ದಳು ಎನ್ನಲಾಗಿದೆ. ಇನ್ನು ಮಮತಾ ತನ್ನ ಪತಿ ವಿಕ್ಕಿ ಜೊತೆ ಹಲವಾರು ವರ್ಷದಿಂದ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags; Mamta Kulkarni, Mamta Kulkarni Arrested, Mamta Kulkarni and Husband, Mamta Kulkarni detained, Mamta Kulkarni held, Mamta Kulkarni Drug Case, Drug Trafficking, Mamta Kulkarni in Kenya, Kenya Police, drug raid, Bollywood Actress Arrested, TV9,News,Videos...,